ಕಸ್ತೂರಿ ದನ ಬೋವಿಡೀ ಕುಟುಂಬಕ್ಕೆ ಸೇರಿದ ಆರ್ಕ್‍ಟಿಕ್ ವಲಯದ ಸ್ತನಿ. == ವೈಜ್ಞಾನಿಕ ವರ್ಗೀಕರಣ == ಆರ್ಟಿಯೋಡ್ಯಾಕ್ಟಿಲ ಗಣ,ಬೊವಿಡೀ ಕುಟುಂಬ ಮತ್ತು ಕ್ಯಾಪ್ರಿನೀ ಉಪಕುಟುಂಬಕ್ಕೆ ಸೇರಿದೆ.ಓವಿಬಾಸ್ ಮಾಸ್ಕೇಟಸ್ ವೈಜ್ಞಾನಿಕ ನಾಮ. == ಲಕ್ಷಣಗಳು == ದನವನ್ನು ಹೋಲುತ್ತದೆ. ಹೇರಳವಾದ ಕೂದಲು, ಸುಂಗಂಧ ಬೀರುವ,ಮೆಲುಕು ಹಾಕುವ ಪ್ರಾಣಿ.ಗಂಡು ಮತ್ತು ಹೆಣ್ಣು ಎರಡಕ್ಕೂ ಬಾಗಿದ ಕೊಂಬು ಇದೆ.ಗಂಡು ೪ ರಿಂದ ೫ ಆಡಿ ಎತ್ತರವಿದ್ದರೆ, ಹೆಣ್ಣು ೪.೪ ಆಡಿಯಿಂದ ೬.೬ ಅಡಿ ಎತ್ತರವಿರುತ್ತದೆ .ಗಿಡ್ಡವಾದ ಬಾಲವಿದೆ.ವಯಸ್ಕ ದನ ಸುಮಾರು ೨೮೫ ಕೆ.ಜಿ.ಭಾರವಿರುತ್ತದೆ.ಉದ್ದವಾದ ಕಪ್ಪು,ಕಂದು ಬಣ್ಣದ ಕೂದಲಿನ ಮೇಲುಹೊದಿಕೆ ಇದೆ.ಬೆದೆ ಬಂದ ಕಾಲದಲ್ಲಿ ಗಂಡು ಸುಂಗಂಧವನ್ನು ಹೊರಸೂಸುತ್ತದೆ.ಸರಾಸರಿ ಆಯುಷ್ಯ ೧೬ರಿಂದ ೨೦ ವರ್ಷ. == ಭೌಗೋಳಿಕ ಹರಡುವಿಕೆ == ಆರ್ಕ್‍ಟಿಕ್ ಪ್ರದೇಶ,ಮುಖ್ಯವಾಗಿ ಕೆನಡಾ,ಗ್ರೀನ್‍ಲ್ಯಾಂಡ್ ಮೂಲ ವಾಸಸ್ಥಾನ .ಈಗ ಸ್ವೀಡನ್,ಸೈಬೀರಿಯಾ,ನಾರ್ವೆ,ಅಲಾಸ್ಕ ಮುಂತಾದ ಪ್ರದೇಶಗಳಲ್ಲಿ ಪರಿಚಯಿಸಲ್ಪಟ್ಟಿದೆ. == ಉಪಯೋಗ == ಇದರ ತುಪ್ಪಳಕ್ಕೆ ಅತ್ಯಂತ ಹೆಚ್ಚು ವಾಣಿಜ್ಯಿಕ ಬೇಡಿಕೆ ಇದೆ. ಇದರ ಸುಂಗಂಧ ದ್ರವ್ಯಕ್ಕೆ ಕೂಡಾ ಹೆಚ್ಚಿನ ಬೇಡಿಕೆ ಇದ್ದು ಇದೇ ಕಾರಣಕ್ಕೆ ಅವೈಜ್ಞಾನಿಕ ಕೊಲ್ಲುವಿಕೆಯಿಂದ ಸಂತತಿ ನಾಶದ ಹಂತ ತಲುಪಿದೆ.ಇದನ್ನು ತುಪ್ಪಳ,ಮಾಂಸ ಮತ್ತು ಹಾಲಿಗಾಗಿ ಕೆಲವೊಮ್ಮ ಸಾಕುವುದೂ ಉಂಟು. == ಬಾಹ್ಯ ಸಂಪರ್ಕಗಳು == . ' 2016-03-03 ವೇಬ್ಯಾಕ್ ಮೆಷಿನ್ ನಲ್ಲಿ. , " ( ) " (Geschlechterverhältnis Schädeln ( ) Ostgrönland) Beiträge - 29 (2004): 187–192. ' /- == ಉಲ್ಲೇಖಗಳು ==